16 ಜುಲೈ by ವಿದ್ಯಾ ವಿನಯ್
1) ಪದಬಂಧದ ಎಲ್ಲ ಬಾಕ್ಸ್ಗಳನ್ನು ಭರ್ತಿ ಮಾಡಿದ ಬಳಿಕವೇ ಚೆಕ್ ಸ್ಕೋರ್ (Check Score)ನೋಡಬೇಕು.
2) ಚೆಕ್ ಸ್ಕೋರ್ ನೋಡುವವರು ಆಟದ ಸ್ಪರ್ಧಿಗಳಾಗಿರುತ್ತಾರೆ.
3) ಒಂದು ವೇಳೆ ರಿವಿಲ್ (Reveal) ಆಯ್ಕೆ ಮಾಡಿಕೊಂಡರೆ ಆಟದ ಸ್ಪರ್ಧೆಯಿಂದ ಹೊರಗುಳಿದಂತೆ.
4) ಒಮ್ಮೆ ರಿವಿಲ್ ಆಯ್ಕೆ ಮಾಡಿಕೊಂಡರೆ ಚೆಕ್ ಸ್ಕೋರ್ ನೋಡಲು ಸಾಧ್ಯವಿಲ್ಲ.
1. ಮಾದಕ ವಸ್ತು ಸೇವನೆಯಿಂದಾಗುವ ಜೊಂಪು (2)
3. ಧಾನ್ಯಗಳನ್ನು ಕುಟ್ಟುವ ಸಾಧನ (3)
5. ಕುದುರೆಯನ್ನೇರುವ ಬಳೆ (3)
7. ಆಸ್ಪತ್ರೆಯನ್ನು ಹೀಗೂ ಹೇಳುವರು (4)
9. ಅಗ್ರಗಣ್ಯರೆಲ್ಲಾ ಪ್ರವೇಶಿದ ಕಾಡು (3)
10. ಹೆಚ್ಚಳವಾದುದನ್ನು ಹೀಗೆನ್ನಿ (3)
11. ನರಕಾಧಿಪತಿಯ ಕಿಂಕರ (4)
13. ಪಟ ತೋರಿಸಿ ಮಾಡಿರುವ ಮೋಸ (3)
15. ಈತ ವಿಷಯಾಸಕ್ತ (3)
16. ಜರೂರಾಗಿ ಹಾಕಿಸಿಕೊಂಡಿರುವ ಸಹಿ (2)
2. ಹಳೆ ಸಾಮಾನುಗಳನ್ನು ಮಾರುವ ಅಂಗಡಿ (3)
3. ನೆನಪು ಮಾಡಿಕೊಂಡು ತೋರುವ ವಯ್ಯಾರ (3)
4. ಮಣ್ಣು ಮಿಶ್ರಿತ ನೀರು (3)
6. ಕಾರು ಅರಣ್ಯದಲ್ಲಿ ಇದ್ದರಷ್ಟೇ ಈ ದಯೆ! (3)
8. ಯಮನ ಬಳಿಯಿರುವ ಜೋಡಿ (3)
9. ದಶಮ ಗ್ರಹ ಎನಿಸಿಕೊಂಡವನು (3)
10. ಸ್ಲೇಟಿನ ಮೇಲೆ ಬರೆಯುವ ಸಾಧನ (3)
12. ಭಾಸ್ಕರ ಹುಟ್ಟಿರುವಾಗ ಕಳ್ಳ ಕಾಣಿಸಿದನಲ್ಲಾ! (3)
13. ಕಲೆಸಿದ ಗೋಧಿ ಹಿಟ್ಟು (3)
14. ಗುರುಗುಟ್ಟುತ್ತಿರುವ ಗಂಡು ಕುರಿ (3)